ಪ್ರೀತಿಸಿ ಮದುವೆಯಾದವಳಿಗಾಗಿ ಮೊಬೈಲ್‌ ಟವರ್ ಏರಿದ ಪತಿ – Police News
728 x 90

ಪ್ರೀತಿಸಿ ಮದುವೆಯಾದವಳಿಗಾಗಿ ಮೊಬೈಲ್‌ ಟವರ್ ಏರಿದ ಪತಿ

ಪ್ರೀತಿಸಿ ಮದುವೆಯಾದವಳಿಗಾಗಿ ಮೊಬೈಲ್‌ ಟವರ್ ಏರಿದ ಪತಿ

ರಾಯಚೂರು ಜಿಲ್ಲೆಯ ಶಾಂತಕುಮಾರ್ ಎಂಬಾತ ಅಸ್ಕಿಹಾಳ ಗ್ರಾಮದ ಕವಿತಾ ಎಂಬ ಹುಡುಗಿಯನ್ನು ಸುಮಾರು ದಿನಗಳಿಂದ ಪ್ರೀತಿಸಿ ಮನೆಯಲ್ಲಿ ಒಪ್ಪದ ಕಾರಣ ಓಡಿ ಹೋಗಿ ಮದುವೆಯಾಗಿದ್ದಾರೆ. ಈ ವಿಚಾರ ತಿಳಿದ ಕವಿತಾಳ ತಂದೆ-ತಾಯಿ ಆಕೆಗೆ ಕರೆ ಮಾಡಿ ‘ನೀನು ಈ ಕೂಡಲೇ ಮನೆಗೆ ಬರಲಿಲ್ಲವಾದರೆ ನಾವು ಸಾಯುತ್ತೇವೆ’ ಎಂದು ಬೆದರಿಕೆ ಹಾಕಿದ್ದಾರೆ. ತಂದೆತಾಯಿಯ ಈ ಬೆದರಿಕೆಯಿಂದ ನೊಂದ ಕವಿತಾ ಕೂಡಲೇ ತವರುಮನೆಗೆ ಓಡಿದ್ದಾಳೆ. ಆದರೆ ಕವಿತಾಳ ತಂದೆತಾಯಿ ಮಗಳು ಮನೆಗೆ ಬಂದ ಕೂಡಲೇ ವರಸೆಯನ್ನೇ ಬದಲಿಸಿ ಆಕೆಯನ್ನು ಮನೆಯಿಂದ

ರಾಯಚೂರು ಜಿಲ್ಲೆಯ ಶಾಂತಕುಮಾರ್ ಎಂಬಾತ ಅಸ್ಕಿಹಾಳ ಗ್ರಾಮದ ಕವಿತಾ ಎಂಬ ಹುಡುಗಿಯನ್ನು ಸುಮಾರು ದಿನಗಳಿಂದ ಪ್ರೀತಿಸಿ ಮನೆಯಲ್ಲಿ ಒಪ್ಪದ ಕಾರಣ ಓಡಿ ಹೋಗಿ ಮದುವೆಯಾಗಿದ್ದಾರೆ. ಈ ವಿಚಾರ ತಿಳಿದ ಕವಿತಾಳ ತಂದೆ-ತಾಯಿ ಆಕೆಗೆ ಕರೆ ಮಾಡಿ ‘ನೀನು ಈ ಕೂಡಲೇ ಮನೆಗೆ ಬರಲಿಲ್ಲವಾದರೆ ನಾವು ಸಾಯುತ್ತೇವೆ’ ಎಂದು ಬೆದರಿಕೆ ಹಾಕಿದ್ದಾರೆ. ತಂದೆತಾಯಿಯ ಈ ಬೆದರಿಕೆಯಿಂದ ನೊಂದ ಕವಿತಾ ಕೂಡಲೇ ತವರುಮನೆಗೆ ಓಡಿದ್ದಾಳೆ. ಆದರೆ ಕವಿತಾಳ ತಂದೆತಾಯಿ ಮಗಳು ಮನೆಗೆ ಬಂದ ಕೂಡಲೇ ವರಸೆಯನ್ನೇ ಬದಲಿಸಿ ಆಕೆಯನ್ನು ಮನೆಯಿಂದ ಹೊರಗೆ ಹೋಗಲು ಬಿಟ್ಟಿಲ್ಲ. ಇದರಿಂದ ನೊಂದ ಶಾಂತಕುಮಾರ್ ರಾಯಚೂರು ನಗರದ ನಿಜಲಿಂಗಪ್ಪ ಕಾಲೋನಿಯ ಕೆ.ಇ.ಬಿ. ಶಾಲೆ ಬಳಿ ಇರುವ ಮೊಬೈಲ್‌ ಏರಿ ಕುಳಿತು ತನ್ನ ಪತ್ನಿ ಬರುವವರೆಗೂ ನಾನು ಇಲ್ಲಿಂದ ಇಳಿಯುವುದಿಲ್ಲ ಎಂದು ಧರಣಿ ನಡೆಸುತ್ತಿದ್ದಾನೆ. ವಿಷಯ ತಿಳಿದು ಶಾಂತಕುಮಾರ್ ತಾಯಿ ಸ್ಥಳಕ್ಕೆ ಓಡಿ ಬಂದು ಅಂಗಲಾಚಿ ಬೇಡಿಕೊಂಡರೂ ಶಾಂತಕುಮಾರ್ ಮನಸ್ಸನ್ನು ಬದಲಾಯಿಸಲೇ ಇಲ್ಲ. ಇನ್ನು ಅಗ್ನಿಶಾಮಕ ದಳದವರು ಮಾಡಿದ ಪ್ರಯತ್ನವು ವಿಫಲವಾಗಿದೆ. ಶಾಂತಕುಮಾರ್ ತಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಿರುವ ದಾಖಲಾತಿಗಳನ್ನು ಕೈಯಲ್ಲಿ ಹಿಡಿದು ಮೀಡಿಯಾದವರಿಗೆ ತೋರಿಸುತ್ತಾ ಆಕೆ ಬರುವವರೆಗೂ ನಾನು ಇಲ್ಲಿಂದ ಕದಲುವುದಿಲ್ಲವೆಂದು ಪಟ್ಟು ಹಿಡಿದ್ದಾನೆ.

Rahul
EDITOR
PROFILE

Posts Carousel

Leave a Comment

Your email address will not be published. Required fields are marked with *

Cancel reply

Latest Posts

Top Authors

Most Commented

Featured Videos

Translate »