728 x 90

ವರುಷದ ಊಟಕ್ಕಾಗಿ ಹರುಷದ ಊಟ ಬಿಟ್ಟ ಬಿಜೆಪಿ

ವರುಷದ ಊಟಕ್ಕಾಗಿ ಹರುಷದ ಊಟ ಬಿಟ್ಟ ಬಿಜೆಪಿ

ವಿಧಾನ ಸಭೆಯ ಫಲಿತಾಂಶ ಹೊರಬಿದ್ದು ಅತಂತ್ರ ಸರಕಾರ ಬಂದಿದೆ. ಸಾಮಾನ್ಯವಾಗಿ ಸರಕಾರ ಸುಭದ್ರವಾಗಿಲ್ಲದಾಗ ಆರಿಸಿ ಹೋದ ಪ್ರತಿನಿಧಿಗಳು ಅಧಿಕಾರ ಉಳಿಕೆಗೆ ಪ್ರಾಶಸ್ತ್ಯ ಕೊಡುತ್ತಾರೆಯೇ ಹೊರತು ಅಭಿವೃದ್ಧಿಗಲ್ಲ. ರಾಜಕಾರಣದಲ್ಲಿ ಸಂಖ್ಯೆ ಮೊದಲು, ನೈತಿಕತೆ ಆಮೇಲೆ ಎಂಬುದು ಶತಃಸಿದ್ಧ. ನಡೆಯುತ್ತಲೋ ಓಡುತ್ತಲೋ ತೆವಳುತ್ತಲೋ ಕೊನೆಗೆ ಉರುಳು ಸೇವೆ ಮಾಡುತ್ತಲೋ ಮ್ಯಾಜಿಕ್ ನಂಬರ್ ಮುಟ್ಟಿ ಬಿಟ್ಟರೆ ಅವರೇ ಪ್ರಭುಗಳು. ಜನಾಭಿಪ್ರಾಯ ಚುನಾವಣಾ ಪೂರ್ವದ ಮಾತಷ್ಟೆ. ಜನಾಭಿಪ್ರಾಯದ ಪ್ರಕಾರ ನೋಡುವುದಾದರೆ ಬಿಜೆಪಿಯ ಕಡೆಗೆ ಜಾಸ್ತಿ ಒಲವಿದೆ. ಆದರೂ ವಿರೋಧ ಪಕ್ಷದ ಜಾಗದಲ್ಲಿ ಕೂಡಬೇಕಾದ

ವಿಧಾನ ಸಭೆಯ ಫಲಿತಾಂಶ ಹೊರಬಿದ್ದು ಅತಂತ್ರ ಸರಕಾರ ಬಂದಿದೆ. ಸಾಮಾನ್ಯವಾಗಿ ಸರಕಾರ ಸುಭದ್ರವಾಗಿಲ್ಲದಾಗ ಆರಿಸಿ ಹೋದ ಪ್ರತಿನಿಧಿಗಳು ಅಧಿಕಾರ ಉಳಿಕೆಗೆ ಪ್ರಾಶಸ್ತ್ಯ ಕೊಡುತ್ತಾರೆಯೇ ಹೊರತು ಅಭಿವೃದ್ಧಿಗಲ್ಲ. ರಾಜಕಾರಣದಲ್ಲಿ ಸಂಖ್ಯೆ ಮೊದಲು, ನೈತಿಕತೆ ಆಮೇಲೆ ಎಂಬುದು ಶತಃಸಿದ್ಧ. ನಡೆಯುತ್ತಲೋ ಓಡುತ್ತಲೋ ತೆವಳುತ್ತಲೋ ಕೊನೆಗೆ ಉರುಳು ಸೇವೆ ಮಾಡುತ್ತಲೋ ಮ್ಯಾಜಿಕ್ ನಂಬರ್ ಮುಟ್ಟಿ ಬಿಟ್ಟರೆ ಅವರೇ ಪ್ರಭುಗಳು. ಜನಾಭಿಪ್ರಾಯ ಚುನಾವಣಾ ಪೂರ್ವದ ಮಾತಷ್ಟೆ. ಜನಾಭಿಪ್ರಾಯದ ಪ್ರಕಾರ ನೋಡುವುದಾದರೆ ಬಿಜೆಪಿಯ ಕಡೆಗೆ ಜಾಸ್ತಿ ಒಲವಿದೆ. ಆದರೂ ವಿರೋಧ ಪಕ್ಷದ ಜಾಗದಲ್ಲಿ ಕೂಡಬೇಕಾದ ಅನಿವಾರ್ಯತೆ. ಯಡಿಯೂರಪ್ಪನವರು ರಾಜೀನಾಮೆ ಕೊಟ್ಟು ಹಿಂದೆ ಸರಿದರು. ಕೂಡಿಕೆ ಮಾಡಿಕೊಂಡ ಪಕ್ಷಗಳು ಸರಕಾರ ರಚನೆಗೆ ನಿಂತವು. ಹೊಸ ಸರಕಾರ ಅದೆಷ್ಟು ಸುಭದ್ರ ಎಂದು ಕಾದು ನೋಡ ಬೇಕಿದೆ.

ಹೋದ ಸಲ ಬಿಜೆಪಿ ಸರಕಾರ ಬಂದಾಗಲೂ ಯಡಿಯೂರಪ್ಪನವರಿಗೆ ಹೊರಗಷ್ಟೆ ಅಲ್ಲ ಪಕ್ಷದ ಒಳಗೂ ಶತ್ರುಗಳಿದ್ದರು. ಯಡಿಯೂರಪ್ಪನವರ ಆಪರೇಷನ್ ಕಮಲ ಅವಾಂತರಗಳ ನಂತರವೂ ಅವರು ಕೆಜೆಪಿ ಕಟ್ಟಿ ಹೊರನಡೆದರು. ಕಾರಣ ಬಿಜೆಪಿಯ ಹೊರಗಿದ್ದೂ ತಾವೊಬ್ಬ ಪ್ರಭಾವಶಾಲಿ ನಾಯಕ ಎಂಬುದನ್ನು ಸಾರಿ ಹೇಳಬೇಕಾದ ತುರ್ತಿತ್ತು. ಕೆಜೆಪಿಯಲ್ಲಿದ್ದರೆ ತಾನು ಮುಖ್ಯಮಂತ್ರಿಯಾಗಲಾರೆ ಎಂಬುದು ವರಿಗೆ ಸ್ಪಷ್ಟವಾಗಿ ತಿಳಿದಿತ್ತು. ಇನ್ನು,ಯಡಿಯೂರಪ್ಪನಿಲ್ಲದ ಬಿಜೆಪಿಯ ಸ್ಥಿತಿ ಏನಾಗಬಹುದು ಎಂಬುದನ್ನು 2013ರ ವಿಧಾನಸಭಾ ಚುನಾವಣೆ ತೋರಿಸಿತ್ತು. ಬಿಜೆಪಿಯ ಹೊರಗಿದ್ದು ಶೇ. 10 ಮತ ಗಳಿಸಿದ್ದು ಯಡಿಯೂರಪ್ಪ ಒಬ್ಬ ಮಾಸ್ ಲೀಡರ್ ಎಂಬುದನ್ನು ತೋರಿಸಿತು. ಇಂತಿಪ್ಪ ಯಡಿಯೂರಪ್ಪನವರನ್ನು ಅಧಿಕಾರ ದಾಹಿ ತನ್ನ ಪಕ್ಷವನ್ನು ಬಲಿಕೊಟ್ಟವ,ಮೂರು ಜನ ಮುಖ್ಯಮಂತ್ರಿಗಳ ಸರಕಾರ ರಚಿಸಿದವ ಎಂದು ವಿರೋಧ ಪಕ್ಷದಾದಿಯಾಗಿ ಹಳಿದರು.

ಅಷ್ಟೇ ಏಕೆ,ಸ್ವತಃ ಕಟ್ಟಾ ಬಿಜೆಪಿ ಕಾರ್ಯಕರ್ತರೇ ಹಳಿಯುತ್ತಿದ್ದ ಕಾಲವೊಂದಿತ್ತು. ಆದರೆ ಅವತ್ತಿನ ಪರಿಸ್ಥಿತಿ ಸಂದಿಗ್ಧಗಳೇನಿದ್ದವೋ ಅದು ಯಡಿಯೂರಪ್ಪನವರಿಗೆ ಮಾತ್ರ ಗೊತ್ತಿತ್ತು. ಅಷ್ಟು ಪ್ರಭಾವಿ ನಾಯಕರಲ್ಲದೇ ಹೋಗಿದ್ದರೆ ವಾಪಾಸು ಮೋದಿ ನಾಯಕತ್ವದ ಬಿಜೆಪಿ ಸ್ವಪಕ್ಷಕ್ಕೆ ಕರೆತರುವ ಗೋಜಿಗೆ ಹೋಗುತ್ತಿರಲಿಲ್ಲ. ಮತ್ತೊಮ್ಮೆ ಕರೆತಂದದ್ದರ ಪರಿಣಾಮ ಒಟ್ಟು 17 ಸೀಟುಗಳು ಬಿಜೆಪಿಯ ಪಾಲಾದವು. ರಾಷ್ಟ್ರೀಯ ನಾಯಕರುಗಳ ಒಳ್ಳೆಯ ಆಡಳಿತವಿದ್ದರೂ, ಅಲೆ ದೇಶದೆಲ್ಲೆಡೆ ಇದ್ದರೂ ರಾಜ್ಯವೊಂದರಲ್ಲಿ ಪಕ್ಷ ಕಟ್ಟಲು ಪ್ರಾದೇಶಿಕ ವರ್ಚಸ್ಸಿನ ನಾಯಕ ಬೇಕು. ಯಡಿಯೂರಪ್ಪನವರ ಹೊರತು ಮತ್ತಾವ ನಾಯಕರೂ ಪಕ್ಷವನ್ನು ಕಟ್ಟಬಲ್ಲಷ್ಟು ಪ್ರಬಲರಾಗಿರಲಿಲ್ಲ. ಇದನ್ನೆಲ್ಲಾ ಗಮನಿಸಿದ ಬಿಜೆಪಿ ರಾಷ್ಟ್ರೀಯ ನಾಯಕರು ಮತ್ತೊಮ್ಮೆ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿ ಪಕ್ಷ ಕಟ್ಟುವ ಹೊಣೆಯನ್ನು ಹೆಗಲಿಗೇರಿಸಿದರು. ಆದರೆ ಬಿಜೆಪಿ ತಾನೊಂದು ಬಲಿಷ್ಠ ವಿರೋಧ ಪಕ್ಷವಾಗಿ ಕಾಣಲೇ ಇಲ್ಲ.

ವಿರೋಧ ಪಕ್ಷ ಆಡಳಿತ ಪಕ್ಷದ ಒಂದೊಂದು ತಪ್ಪನ್ನು ಎತ್ತಿ ತೋರಿಸುವ ಕೈಂಕರ್ಯದಿಂದ ತುಂಬಾ ದೂರ ಬಿಟ್ಟಿತು. ಎಷ್ಟೆಂದರೆ, ದೋಸೆಯಲ್ಲೂ ರಂದ್ರಾನ್ವೇಷಣೆ ಮಾಡದಷ್ಟು ನಿಷ್ಕ್ರೀಯವಾಗಿತ್ತು. ತೀರಾ ಇತ್ತೀಚೆಗೆ ಅಮಿತ್ ಶಾ ಇನ್ನಿತರೆ ನಾಯಕರು ಬಂದು ಎಚ್ಚರಿಸುವವರೆಗೂ ಬಿಜೆಪಿಗೆ ತನ್ನ ಅಸ್ತಿತ್ವದ ಪರಿಚಯವೇ ಇರಲಿಲ್ಲ. ಇಷ್ಟಾಗಿಯೂ ಬಿಜೆಪಿ 104 ಸೀಟುಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಇದಕ್ಕೆ ಯಡಿಯೂರಪ್ಪನವರ ವರ್ಚಸ್ಸಿನ ಜತೆಗೆ ಮೋದಿ ಅಲೆ ರಾಷ್ಟ್ರೀಯ ನಾಯಕರ ಸಕ್ರಿಯ ಪ್ರಚಾರಗಳ ಫಲ. ಇದೆಲ್ಲದರ ಜತೆಗೆ ಕರಾವಳಿಯಲ್ಲಿ ಬಿಜೆಪಿ ಈ ಮಟ್ಟಿಗೆ ಯಶಸ್ಸು ಗಳಿಸಲು ಬಿಜೆಪಿಯ ಹಿಂದೂ ಸಂಘಟನೆಗಳೂ ಇಲ್ಲಿ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಎಂಬ ಪಕ್ಷಗಳ ಆಚೆಗೆ ಕೂತು ನೋಡಿದಾಗ ಅಕಾಸ್ಮಾತ್ ಬಿಜೆಪಿ ಏನಾದರೂ ತಂತ್ರಗಾರಿಕೆ ಮಾಡಿ ಸರಕಾರ ರಚಿಸಿದ್ದರೂ ಮತ್ತೊಮ್ಮೆ ಅದರ ಉಳಿವಿಗಾಗಿ ದಿನಕ್ಕೊಂದು ಅವಾಂತರ ಮಾಡಿಕೊಳ್ಳಬೇಕಿತ್ತು.

ಹೊರಗಡೆಯಿಂದ ಪಕ್ಷದ ಕಕ್ಷೆಗೆ ಬಂದ ಜನ ನಿಧಾನಕ್ಕೆ ಪಕ್ಷದ ಮೇಲೆ ಹಿಡಿತ ಸಾಧಿಸಲು ಶುರುಮಾಡಿ ಮೂಲ ಬಿಜೆಪಿಗರನ್ನು ಮೂಲೆಗೆ ತಳ್ಳುವುದು ಮತ್ತೊಮ್ಮೆ ಮುಂದುವರಿಯುತ್ತಿತ್ತು. ಇದರಿಂದ ಮೂಲ ಬಿಜೆಪಿಗರಲ್ಲಿ ಅಸಮಾಧಾನ ಸೃಷ್ಟಿಯಾಗುತ್ತಿತ್ತು. ಹೋದ ಸಲ ನಡೆದ ಆಪರೇಷನ್ ಕಮಲ ರಾಜಕಾರಣ ಇತ್ಯಾದಿ ಕಿಚಡಿ ಸರಕಾರದಾಟಗಳಿಗೆ ನಾವುಗಳು ಸಾಕ್ಷಿಯಾಗಬೇಕಿತ್ತು. ಇಂಥ ಪ್ರಹಸನಗಳಿಗೆ ಎಡೆ ಮಾಡಿಕೊಡದೇ ಹೊರನಡೆದ ಬಿಜೆಪಿಯ ನಡೆ ಅನುಕರಣೀಯ.ಆದರೂ ಬಹುಮತ ಸಾಬೀತಿನ ಸಾಹಸಕ್ಕೂ ಇಳಿಯದೇ ಮೊದಲೇ ವಿರೋಧ ಪಕ್ಷದಲ್ಲಿ ಕೂತು ಬಿಟ್ಟಿದ್ದರೆ ಬಿಜೆಪಿಯ ಘನತೆ ಇನ್ನಷ್ಟು ಹೆಚ್ಚುತ್ತಿತ್ತು. ಜನತೆಯ ಕಣ್ಣಲ್ಲಿ ಬಿಜೆಪಿ ಕಣ್ಮಣಿಯಾಗುತ್ತಿತ್ತು. ಬಹುಮತ ಸಾಬೀತು ಪಡಿಸಲು ಹೋಗಿ ಅದು ಎಡವಿದ್ದಂತೂ ಸುಳ್ಳಲ್ಲ.

ಈ ಮೊದಲು ಯುಪಿಎ 2 ಸರಕಾರವಿದ್ದಾಗ ಅದರ ತಪ್ಪುಗಳನ್ನು ಸಂಸತ್ತಿನಲ್ಲಿ ಎತ್ತಿ ತೋರಿಸಿದಾಗ ನಮ್ಮ ರಾಜ್ಯದೆಡೆಗೆ ಬೆರಳು ಮಾಡಿ ಕೇಂದ್ರ ಬಿಜೆಪಿಯನ್ನು ಮೌನವಾಗಿಸುತ್ತಿದ್ದರು.ಮತ್ತೊಮ್ಮೆ ಮೋದಿಯವರನ್ನು ಅಂಥ ಸಂದಿಗ್ಧಕ್ಕೆ ತಳ್ಳದೇ ಆಳುವಿಕೆಯಿಂದ ಹಿಂದೆ ಸರಿದಿರುವುದು ಉತ್ತಮ. ಬಿಜೆಪಿಯ ಈ ನಡೆ ಮುಂದಿನ ಲೋಕಸಭಾ ಚುನಾವಣೆಗೂ ಒಂದು ಸಕಾರಾತ್ಮಕ ಅಂಶವಾಗುವುದರಲ್ಲಿ ಸಂದೇಹವೇ ಇಲ್ಲ. ಹಲವು ಜನ ಶಾಸಕರನ್ನು ಗಾಳ ಹಾಕಿ, ದಿನಕ್ಕೊಂದು ರಂಪಾಟ ಮಾಡಿ ಸ್ವ ಪಕ್ಷದಲ್ಲೊಂದು ವಿರೋಧ ಪಕ್ಷವನ್ನು ಸೃಷ್ಟಿಸಿಕೊಂಡು ಲೋಕಸಭಾ ಚುನಾವಣೆ ಹೊತ್ತಿಗೆ ಜನರಿಂದ ಛೀ, ಥೂ ಎನಿಸಿಕೊಳ್ಳುವ ಬದಲು ಹಿಂದೆ ಸರಿದಿದ್ದು ನಡೆ ಎಂದೇ ಹೇಳಬಹುದು.

ಮುಂದಿನ ಲೋಕಸಭೆಯಲ್ಲಿ ಬಿಜೆಪಿ ಮತ್ತು ನರೇಂದ್ರ ಮೋದಿಯವರ ವಿರುದ್ಧ ಬರೀ ಕಾಂಗ್ರೆಸ್ ನಿಲ್ಲುವುದಿಲ್ಲ. ಅದಲ್ಲದೇ ರಾಷ್ಟ್ರ ರಾಜಕಾರಣದ ದೃಷ್ಟಿಯಿಂದ ಸದ್ಯಕ್ಕೆ ಕಾಂಗ್ರೆಸ್ ಒಂದು ಬಲಿಷ್ಟ ಪಕ್ಷವೂ ಅಲ್ಲ. ಹೀಗಾಗಿ ಮುಂದಿನ ಚುನಾವಣೆ ಬಿಜೆಪಿ ಮತ್ತು ಬಿಜೆಪಿಯೇತರ ಪಕ್ಷಗಳ ನಡುವಿನ ದೊಡ್ಡ ಮಟ್ಟದ ಹೋರಾಟ. ಒಂದು ವೇಳೆ ಕರ್ನಾಟಕದ ಬಿಜೆಪಿಯ ಸಂಘಟನೆಯಲ್ಲಿ ಬಿರುಕುಗಳು ಕಂಡರೆ ಲೋಕಸಭೆಯಲ್ಲಿ ಕೇಂದ್ರ ಬಿಜೆಪಿಗೆ ಹಿನ್ನಡೆ ತಪ್ಪಿದ್ದಲ್ಲ. ಅಷ್ಟಲ್ಲದೇ ಈ ಮೊದಲಿನ ಸರಕಾರ ಯಾವ ರೀತಿ ಆಗಿನ ಅಡ್ವಾಣಿಯವರ ಕೇಂದ್ರ ಬಿಜೆಪಿಗೆ ಮುಜುಗರ ತಂದಿತ್ತೋ ಅದೇ ರೀತಿ ಅಭಿವೃದ್ಧಿಯ ನಾಗಾಲೋಟದಲ್ಲಿರುವ ಕೇಂದ್ರ ಬಿಜೆಪಿ ಸರಕಾರಕ್ಕೆ ರಾಜ್ಯ ಬಿಜೆಪಿ ಕಾಲಿಗಂಟಿದ ಮುಳ್ಳಾಗುತ್ತಿತ್ತು.

ಯಡಿಯೂರಪ್ಪನವರು ಅಧಿಕಾರ ಬಿಟ್ಟಿದ್ದು ಅವರಿಗೆ ಈ ಹಿಂದೆ ಇದ್ದ ಕಳಂಕವನ್ನು ಅಳಿಸಿ ಹಾಕಿತು ಎಂದರೂ ತಪ್ಪಾಗಲಾರದು. ‘ನಾನು ಹೋರಾಟದ ಹಾದಿಯಿಂದ ಬಂದವನು. ಅಧಿಕಾರಕ್ಕಾಗಿ ಅಲ್ಲ,ಜನರಿಗಾಗಿ ಪ್ರಾಣ ಕೊಡುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ಮೋದಿಯವರಿಗೆ 28 ಸೀಟುಗಳನ್ನು ಗೆಲ್ಲಿಸಿ ಕೊಡುತ್ತೇನೆ’ ಎಂದು ಹೇಳಿ ಅವರು ಹಿಂದೆ ಸರಿದಿದ್ದು ಅವರ ಬಗ್ಗೆ ಇದ್ದ ಗೌರವ ಇಮ್ಮಡಿಸುವಂತೆ ಮಾಡಿತು. ಇಷ್ಟು ದಿನ ಅವರಿಗಿದ್ದ ‘ಅಧಿಕಾರ ದಾಹಿ’ ಎಂಬ ಹಣೆಪಟ್ಟಿ ಕಳಚಿ ಅವರೆಡೆಗೆ ವಿಶ್ವಾಸ ಮೂಡಿದೆ. ಆದರೆ ಜನ ಯಾವುದನ್ನೂ ಹೆಚ್ಚು ದಿನ ನೆನಪಿಟ್ಟುಕೊಳ್ಳುವುದಿಲ್ಲ. ಯಡಿಯೂರಪ್ಪನವರ ನಾಯಕತ್ವದ ರಾಜ್ಯ ಬಿಜೆಪಿ ಎಲ್ಲಕ್ಕಿಂತ ಮೊದಲು ಕ್ರಿಯಾಶೀಲ ವಿರೋಧ ಪಕ್ಷವಾಗಬೇಕು.

ಕೇಂದ್ರ ಬಿಜೆಪಿಯ ಸವಲತ್ತುಗಳನ್ನು ಮತ್ತು ಕಾರ್ಯಗಳನ್ನು ರಾಜ್ಯದ ಕೊನೆಯ ಪ್ರಜೆಗೂ ತಲುಪಿಸಬೇಕು. ಪಕ್ಷ ಸಂಘಟನೆಯ ಬಗ್ಗೆ ಯಡಿಯೂರಪ್ಪನವರಿಗೆ ಹೇಳಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಟ್ಟಾಳುವಾದ ಅವರು ಸಂಘಟನೆಯಲ್ಲಿ ನಿಸ್ಸೀಮರು. ಪಕ್ಷದೊಳಗಿನ ಒಡಕು ಬಗೆಹರಿದಿದ್ದು ಮತ್ತೊಮ್ಮೆ ಅಂಥ ಒಡಕಿಗೆ ಕಾರಣವಾಗಬಾರದು. ಯಡಿಯೂರಪ್ಪನವರ ಸರಿಸಮಾನರಾದ ಕೆಲವು ನಾಯಕರಿದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ಅವರು ಸರಕಾರವನ್ನು ಪಕ್ಷವನ್ನು ಕಟ್ಟುವಷ್ಟು ಸಮರ್ಥರಲ್ಲದಿದ್ದರೂ, ಮುರಿಯುವಷ್ಟು ಸಮರ್ಥರು! ಯಡಿಯೂರಪ್ಪ ತಮ್ಮ ಸುತ್ತಲಿನ ಕೆಲ ಜನರನ್ನು ದೂರವಿಟ್ಟರೆ ಅವರ ಮೇಲಿನ ಜನರ ಅಭಿಮಾನ ಕೂಡಾ ವೃದ್ಧಿಸುತ್ತದೆ.

ಅದಲ್ಲದೇ ಈಗಿನ ಜನರಿಗೆ ಜಾತಿ ರಾಜಕಾರಣಕ್ಕಿಂತ ಅಭಿವೃದ್ಧಿಪರ ರಾಜಕಾರಣದೆಡೆಗೆ ಒಲವಿದೆ. ಎಲ್ಲೋ ಸ್ವಲ್ಪ ಜನ ಜಾತಿಯಾಧಾರಿತ ರಾಜಕಾರಣದ ಮೊರೆ ಹೋಗಬಹುದು. ಅಭಿವೃದ್ಧಿಯನ್ನು ಜನರ ಮುಂದೆ ಹಿಡಿಯೋಕೆ ಕೇಂದ್ರದ ಹತ್ತಾರು ಅಭಿವೃದ್ಧಿ ಕಾರ್ಯಗಳಿವೆ. ಒಂದೇ ಒಂದು ಭ್ರಷ್ಟಾಚಾರದ ಆರೋಪಗಳು ಕೇಂದ್ರ ಬಿಜೆಪಿಗರ ಮೇಲಿಲ್ಲ. ಇಂಥ ಒಂದು ಪಾರದರ್ಶಕ ಆಡಳಿತವನ್ನು ಜನರ ಮುಂದೆ ತೋರಿಸಲಾಗಿ ಜನ ಅದಕ್ಕೆ ತಲೆಬಾಗಲೇ ಬೇಕು. ಹರ್ಷದ ಊಟವನ್ನು ಅಲ್ಲಿಗೆ ಬಿಟ್ಟು ವರ್ಷದ ಊಟಕ್ಕೆ ತಯಾರಿ ನಡೆಸುವ ಹಾದಿಯಲ್ಲಿರುವ ಬಿಜೆಪಿ ಈ ಹಿಂದಿನ ತಪ್ಪುಗಳಿಂದ ಪಾಠ ಕಲಿತರೆ ಮತ್ತು ಲೋಕಸಭೆಯಲ್ಲೂ ಗೆಲುವು ಸಾಧ್ಯ. ಬಹುಮತ ಸಾಬೀತಿನಲ್ಲಿ ಸೋತು ಕೋಟ್ಯಂತರ ಕನ್ನಡಿಗರ ಮನಸ್ಸನ್ನು ಯಡಿಯೂರಪ್ಪನವರು ಗೆದ್ದಿದ್ದಾರೆ. ಇನ್ನು ಲೋಕಸಭೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಹೊಣೆ ಅವರ ಹೆಗಲಿಗೇರಿದೆ. ಆ ಹೊಣೆಯನ್ನು ಅವರು ಎಷ್ಟು ಪರಿಣಾಮಕಾರಿಯಾಗಿ ನಿಭಾಯಿಸುತ್ತಾರೆ ಕಾದು ನೋಡಬೇಕು.

Bhanu343431
ADMINISTRATOR
PROFILE

Posts Carousel

Leave a Comment

Your email address will not be published. Required fields are marked with *

Cancel reply

Latest Posts

Top Authors

Most Commented

Featured Videos

Categories


custom coursework here essay lib

Translate »
free premium wordpress themes