ಸ್ಥಾಪಕರ ಪರಿಚಯ: ಎಂ. ಮಲ್ಲಿಕಾರ್ಜುನಯ್ಯ

ಸಂಪಾದಕರ ಪರಿಚಯ : ಪೊಲೀಸ್ ನ್ಯೂಸ್ (ವಾರಪತ್ರಿಕೆ), ಆದರ್ಶ ಗಂಡ ಹೆಂಡತಿ (ಮಾಸಪತ್ರಿಕೆ)

ಸ್ಥಾಪಕರು ಮತ್ತು ಗೌರವ ಸಂಪಾದಕರು :’ಕರ್ನಾಟಕ ಮಲ್ಲ’, ದೈನಿಕ ಮುಂಬೈ

ಸ್ಥಾಪಕರು : ‘ಮಂಗಳೂರು ಮಿತ್ರ’ ದೈನಿಕ, ಮಂಗಳೂರು

30 ವರ್ಷಗಳ ಪತ್ರಿಕೋದ್ಯಮ ದುಡಿಮೆ/ಸೇವೆ

ಜನನ: 29-3-1954ರಲ್ಲಿ ಕೆ.ಪಿ. ಮಲ್ಲೇಶನ್ ಮತ್ತು ಸರಸ್ವತಮ್ಮ ಇವರ ಪುತ್ರನಾಗಿ ಬೆಂಗಳೂರು ಜಿಲ್ಲೆ ಕನಕಪುರ ತಾಲ್ಲೂಕು, ಸಂತೆಕೋಡಿಹಳ್ಳಿ ಗ್ರಾಮದಲ್ಲಿ ಜನನ.

ವಿದ್ಯಾಭ್ಯಾಸ:

  • ಹುಟ್ಟೂರಿನಲ್ಲಿ ಎಸ್‌ಎಸ್‌ಎಲ್‌ಸಿವರೆಗೆ ಶಿಕ್ಷಣ.
  • ಕನಕಪುರದಲ್ಲಿ ಪಿ.ಯು.ಸಿ.
  • ನಂತರ ಬೆಂಗಳೂರಿನ ಸರಕಾರಿ ಕಾಲೇಜಿನಲ್ಲಿ 1974ರಲ್ಲಿ ಬಿ.ಎಸ್ಸಿ, ಪದವಿ.
  • 1974ರಿಂದ ಬೆಂಗಳೂರು ವಿಶ್ವವಿದ್ಯಾನಿಲಯದ ಕಾನೂನು ಕಾಲೇಜಿನಲ್ಲಿ ಎಲ್.ಎಲ್.ಬಿ., ಅಭ್ಯಾಸ, ಕಾನೂನು ಶಿಕ್ಷಣ ಅಪೂರ್ಣ.
  • ಬಿ.ಎಸ್ಸಿ ನಂತರ ಬಿ.ಎಸ್. (ಕಮ್ಯುನಿಕೇಶನ್) ಪತ್ರಿಕೋದ್ಯಮ ಪದವಿ ಗಳಿಸಲು ಪ್ರಯತ್ನಿಸಲಾಗಿ ಪ್ರವೇಶ ದೊರೆಯದ ಕಾರಣ ಕಾನೂನು ಶಿಕ್ಷಣಕ್ಕೆ ಮೊರೆ.
  • ಕಾನೂನು ವಿದ್ಯಾರ್ಥಿಯಾಗಿದ್ದಾಗಲೇ 1975ರಲ್ಲಿ ‘ಶಿಕ್ಷಣ ಸುಧಾರಕ’ ಎಂಬ ಕನ್ನಡ ಪಾಕ್ಷಿಕ ಪತ್ರಿಕೆಯ ಸಂಪಾದನೆ.
  • ಹಲವು ವರ್ಷಗಳ ಕಾಲ ನಿರಂತರವಾಗಿ ಪ್ರಕಟಿಸಿ ಶಿಕ್ಷಣ ಕ್ಷೇತ್ರದ ಗಮನ ಸೆಳೆದದ್ದು ಗಮನಾರ್ಹ.

ಕೌಟುಂಬಿಕ ಜೀವನ: 1980ರಲ್ಲಿ ಚಿ.ಸೌ. ಅನ್ನಪೂರ್ಣಳನ್ನು ಕೈ ಹಿಡಿದಾಗ 26 ವರ್ಷ, ಪ್ರಸಕ್ತ ಇಬ್ಬರು ಮಕ್ಕಳ ಸಣ್ಣ ಕುಟುಂಬ.

ಅಲೆದದ್ದು ಕೆಲಸಕ್ಕಾಗಿ: 1983-84ರಲ್ಲಿ ಕುಟುಂಬ ನಿರ್ವಹಣೆ ದುಸ್ತರವಾದಾಗ ಕೆಲಸಕ್ಕಾಗಿ ‘ಲೋಕವಾಣಿ’ ದಿನಪತ್ರಿಕೆ ಕಚೇರಿಗೆ ಅಲೆದಾಟ, ಉದ್ಯೋಗ ದೊರಕದೇ ನಿರಾಸೆ.

ದೊರೆತದ್ದು ಮಾಲೀಕತ್ವ:

  • 1985ರಲ್ಲಿ ‘ಪೊಲೀಸ್ ನ್ಯೂಸ್’ ಪತ್ರಿಕೆ ಪಾಕ್ಷಿಕವಾಗಿ ಉದಯ.
  • 1987ರಲ್ಲಿ ವಾರಪತ್ರಿಕೆಯಾಗಿ ಪರಿವರ್ತನೆ.
  • ಪತ್ರಿಕೆ ಪ್ರಾರಂಭಿಸಿ ಒಂದು ವರ್ಷದಲ್ಲೇ ಒಂದು ಲಕ್ಷದ ಪ್ರಸಾರದ ದಾಖಲೆ, 2ನೇ ವರ್ಷದಲ್ಲಿ ಒಂದೂವರೆ ಲಕ್ಷದ ಗಡಿ ದಾಟಿದ ಹೆಗ್ಗಳಿಕೆ.
  • 1987ರಲ್ಲಿ ‘ಪೊಲೀಸ್ ನ್ಯೂಸ್’ ಪತ್ರಿಕೆ ಸ್ವಂತ ವೆಬ್ ಆಫ್‌ಸೆಟ್ ಮುದ್ರಣ ಯಂತ್ರದ ಖರೀದಿಯೊಂದಿಗೆ ಸ್ವಂತ ಕಾಲ ಮೇಲೆ ಪತ್ರಿಕೆ ತಳವೂರಿದ ದಾಖಲೆ.
  • ಲೋಕವಾಣಿ ದಿನಪತ್ರಿಕೆಯಲ್ಲಿ ಕೆಲಸಕ್ಕಾಗಿ ಅಲೆದಾಡಿದ್ದು ಒಂದು ದಿನವಾದರೆ 1987ರಲ್ಲಿ ಅದೇ ‘ಲೋಕವಾಣಿ’ ದಿನಪತ್ರಿಕೆ ಮಾಲೀಕತ್ವ ಹುಡುಕಿಕೊಂಡು ಬಂದು 2 ವರ್ಷಗಳ ಕಾಲ ಲೋಕವಾಣಿ ದೈನಿಕದ ಸಂಪಾದಕ, ಮಾಲೀಕನಾಗಿ ದುಡಿದ ಅನುಭವ.

ಹಲವು ಪತ್ರಿಕೆಗಳಿಗೆ ಕಾರಣಕರ್ತ

ಸಂಜೆ ದೈನಿಕ: 1990ರಲ್ಲಿ ಮಂಗಳೂರು ನಗರದಿಂದ ‘ಮಂಗಳೂರು ಮಿತ್ರ’ ಪ್ರಥಮ ಸಂಜೆ ದಿನಪತ್ರಿಕೆಯ ಪ್ರಕಟಣೆ ಪ್ರಾರಂಭ.

ದಕ್ಷಿಣ ಕನ್ನಡ ಜಿಲ್ಲೆ ಉಡುಪಿ ಜಿಲ್ಲೆ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಅತಿ ಶೀಘ್ರವಾಗಿ ಜನಮನ್ನಣೆ ಗಳಿಸಿ ಆ ಪ್ರದೇಶದಲ್ಲಿ ಹೊಸದಾಗಿ ಸಂಜೆ ದಿನಪತ್ರಿಕೆಯ ಓದುವ ಅಭ್ಯಾಸ ಓದುಗರಲ್ಲಿ ಉಂಟು ಮಾಡಿದ ಫಲವಾಗಿ ಈಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ತಾರು ಸಂಜೆ ದೈನಿಕಗಳು ಜನ್ಮ ತಾಳಿವೆ.

ಮುಂಬೈಯಲ್ಲಿ:

  • 1992ರಲ್ಲಿ ಮುಂಬಯಿ ಮಹಾನಗರಕ್ಕೆ ಪ್ರಯಾಣ.
  • ಹೊರನಾಡ ಕನ್ನಡಿಗರಿಗಾಗಿ 8 ಪುಟಗಳ ಸಮಗ್ರ ಕನ್ನಡ ಬೆಳಗಿನ ದಿನಪತ್ರಿಕೆ ‘ಕರ್ನಾಟಕ ಮಲ್ಲ’ದ
  • ಉದಯ ಸ್ಥಾಪಕ ಸಂಪಾದಕ, ಮಾಲೀಕನಾಗಿ ಯಶಸ್ವಿ.
  • ಪತ್ರಿಕೆ ಮುದ್ರಣಗೊಂಡ ಕೆಲವೇ ಗಂಟೆಗಳಲ್ಲಿ ಗಲ್ಫ್ ರಾಷ್ಟ್ರಗಳಿಗೂ ಪ್ರಸಾರ ಹೊಂದಿದ ಪ್ರಥಮ ಕನ್ನಡ ದೈನಿಕ.
  • ಮಹಾರಾಷ್ಟ್ರ ಅಷ್ಟೇ ಅಲ್ಲದೇ ಗುಜರಾತ್ ಮತ್ತಿತರೆ ಕನ್ನಡಿಗರು ವಾಸಿಸುವ ಮತ್ತಿತರ ಪ್ರದೇಶಗಳಲ್ಲಿ ಪತ್ರಿಕೆ ಪ್ರಸಾರ.

ಆದರ್ಶ ಗಂಡಹೆಂಡತಿ:

  • 1996ರಲ್ಲಿ ‘ಆದರ್ಶ ಗಂಡಹೆಂಡತಿ’ ಎಂಬ ವೈದ್ಯಕೀಯ ವಿಜ್ಞಾನ ಆರೋಗ್ಯ ಮಾಸಪತ್ರಿಕೆಯ ಪ್ರಕಟಣೆ ಪ್ರಾರಂಭ. ಜನಪ್ರಿಯತೆ ಗಳಿಸಿ ಹೆಚ್ಚಿನ ಪ್ರಸಾರದೊಂದಿಗೆ ಮುನ್ನಡೆ.
  • 1999ರ ಏಪ್ರಿಲ್‌ನಲ್ಲಿ ‘ಶುಭದಿನ’ ಪ್ರಥಮ ವಾಣಿಜ್ಯ ಕನ್ನಡ ದೈನಿಕದ ಆರಂಭ.
  • ಜೂನ್ ತಿಂಗಳಿನಲ್ಲಿ ‘ಸಿಟಿ ಟುಡೆ’ ಇಂಗ್ಲೀಷ್ ಸಂಜೆ ದೈನಿಕದ ಪ್ರಾರಂಭ.
  • ಎರಡೂ ಮೂತ್ರಪಿಂಡಗಳ ವೈಫಲ್ಯಗೊಂಡು ಅನಾರೋಗ್ಯದಿಂದ ಹಾಸಿಗೆ ಹಿಡಿದ ಕಾರಣ ತಾತ್ಕಾಲಿಕವಾಗಿ ಈ ಎರಡು ದೈನಿಕಗಳ ಪ್ರಕಟಣೆ ನಿಲುಗಡೆ.
  • ‘ಕರ್ನಾಟಕ ಮಲ್ಲ’ ದೈನಿಕ ಮುಂಬಯಿ ನಗರದಿಂದ ಗೌರವ ಸಂಪಾದಕತ್ವದಲ್ಲಿ ನಿರಂತರವಾಗಿ ಮುನ್ನಡೆದಿದ್ದು ಮಂಗಳೂರಿನ ‘ಮಂಗಳೂರು ಮಿತ್ರ’ ಬೇರೆಯವರ ಸಂಪಾದಕತ್ವದಲ್ಲಿ ನಿರಂತರವಾಗಿ ಪ್ರಕಟಣೆಗೊಳ್ಳುತ್ತಿದೆ.
  • ‘ಪೊಲೀಸ್ ನ್ಯೂಸ್’ ಕೆಲಕಾಲ ತಮಿಳು, ಹಿಂದಿ ಭಾಷೆಗಳಲ್ಲೂ ಪ್ರಕಟಣೆ ಕಂಡಿತಾದರೂ ಕಾರ್ಯದ ಒತ್ತಡ ಜಾಸ್ತಿ ಆದುದ್ದರಿಂದ ಆರೋಗ್ಯ ದೃಷ್ಟಿಯಿಂದ ಸದ್ಯಕ್ಕೆ ಕನ್ನಡ ಭಾಷೆಯ ‘ಪೊಲೀಸ್ ನ್ಯೂಸ್’ ವಾರಪತ್ರಿಕೆ ನಿರಂತರವಾಗಿ ‘ಆದರ್ಶ ಗಂಡ ಹೆಂಡತಿ’ ಮಾಸಿಕದ ಜೊತೆ ಜನಪ್ರಿಯತೆಯೊಂದಿಗೆ ಮುನ್ನಡೆದಿದೆ.

30 ವರ್ಷಗಳ ಸುದೀರ್ಘ ಸೇವೆ:

  • ತಂದೆ ಕೆ.ಪಿ. ಮಲ್ಲೇಶನ್ ಅವರ ಬಳುವಳಿಯಾಗಿ ಸ್ಫೂರ್ತಿ ಪಡೆದು ಅವರ ಪ್ರೇರಣೆಯಲ್ಲಿ ಪತ್ರಿಕೋದ್ಯಮಕ್ಕೆ ಪಾದಾರ್ಪಣೆ ಮಾಡಿ 30 ವರ್ಷಗಳೇ ಸಂದಿವೆ.
  • ಯಾವುದೇ ದೊಡ್ಡ ಘನ ಉದ್ದೇಶಗಳನ್ನು ಮುಂದಿಟ್ಟುಕೊಂಡು ಪತ್ರಿಕೋದ್ಯಮಕ್ಕೆ ಬಂದಿದ್ದಲ್ಲವಾದರೂ ಆರಂಭದಲ್ಲಿ ಉದರ ಪೋಷಣೆಯೇ ಮುಖ್ಯ ಗುರಿಯಾಗಿ ಕಾಯಾ ವಾಚಾ ಮನಸಾ ತ್ರಿವಿದ ಶುದ್ದಿಯಿಂದ ದುಡಿಮೆ ಮಾಡಿದ ಫಲ ಸಿಕ್ಕಿದ್ದು ಯಶಸ್ಸು ಪ್ರಾರಂಭಿಸಿದ ಪತ್ರಿಕೆಗಳೆಲ್ಲಾ ಯಶಸ್ಸು ಕಂಡಿವೆ.
  • ತಮ್ಮ 30 ವರ್ಷಗಳ ಸೇವೆಯಲ್ಲಿ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ ತರಬೇತಿ ನೀಡಿದ್ದರಿಂದ ಅನೇಕ ತರುಣರು ನಾಡಿನ ವಿವಿಧ ಪತ್ರಿಕೆಗಳಲ್ಲಿದ್ದಾರೆ.
  • ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ಮುಖವಾಣಿ ‘ವೈದ್ಯಕೀಯ ಸಾಹಿತ್ಯ’ ಮಾಸಪತ್ರಿಕೆಯ ಗೌರವ ಸಂಪಾದಕನಾಗಿ 2 ವರ್ಷಗಳ ಸೇವೆ.
  • ಕಲೆ, ಧರ್ಮ, ಸಾಹಿತ್ಯ ಹಾಗೂ ಶೈಕ್ಷಣಿಕ ವಿಚಾರಗಳಿಗೇ ಮೀಸಲಾದ ಮಾಸಪತ್ರಿಕೆ ‘ದೇಗುಲ ಪ್ರಭೆ’ ಗೌರವ ಸಂಪಾದಕನಾಗಿ  ಒಂದು ವರ್ಷ ನಿರಂತರ ಸೇವೆ.
  • ಅನೇಕ ಸೇವಾ ಸಂಸ್ಥೆಗಳಲ್ಲಿ ಧರ್ಮದರ್ಶಿಯಾಗಿ, ಸದಸ್ಯನಾಗಿ, ಸೇವೆ.
  • ಅಂತರರಾಷ್ಟ್ರೀಯ ಸೇವಾ ಲಯನ್ಸ್ ಸಂಸ್ಥೆ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಮೆಜೆಸ್ಟಿಕ್ ಕ್ಲಬ್ಬಿನ ಅಧ್ಯಕ್ಷನಾಗಿ ಗೌರವ ಪ್ರಾಪ್ತಿ.
  • ವೈದ್ಯಕೀಯ ತಪಾಸಣಾ ಶಿಬಿರಗಳು, ಗ್ರಾಮಾಂತರ ಪ್ರದೇಶದ ಮಕ್ಕಳಲ್ಲಿ ನಾಯಕತ್ವ ಬೆಳೆಸಲು ತರಬೇತಿ ಶಿಬಿರಗಳನ್ನು ನಡೆಸುವುದು.
  • ಅಪಾರ ಅಪರಾಧ ಕಾರ್ಯಾಗಾರಗಳನ್ನು ನಡೆಸಿ ಶಾಲಾ ಮಕ್ಕಳಲ್ಲಿ ಅಪರಾಧ ವಿಜ್ಞಾನದ ಪರಿಚಯ ಮಾಡಿಸಿ ಮಕ್ಕಳಲ್ಲಿ ಅಪರಾಧ ತಡೆಗಟ್ಟುವ ಬಗ್ಗೆ ಅರಿವು ಮೂಡಿಸುವಲ್ಲಿ ಪ್ರಯತ್ನ, ಸೇವಾ ಕಾವ್ಯಗಳ ಬಗ್ಗೆ ಸಭೆ, ಸಮಾರಂಭ ಆಯೋಜಿಸಿ ಜನ ಜಾಗೃತಿ ಮೂಡಿಸುವುದು ಅಭ್ಯಾಸ.
  • 1989ರಲ್ಲಿ ಸಿಂಗಾಪುರ, ಹಾಂಗ್ ಕಾಂಗ್ ಮತ್ತಿತರ ದೇಶಗಳಿಗೆ ಭೇಟಿ.
  • 1993ರಲ್ಲಿ ಗಲ್ಫ್ ರಾಷ್ಟ್ರಗಳಿಗೆ ಪ್ರವಾಸ ದುಬೈ, ಅಬುದಾಭಿಗಳಲ್ಲಿ ಕನ್ನಡ ಸಂಸ್ಥೆಗಳಿಂದ ಪತ್ರಿಕೋದ್ಯಮ ಸೇವೆ ಗುರುತಿಸಿ ಗೌರವ ಸನ್ಮಾನ ಸ್ವೀಕಾರ.
  • 1993-94ರಲ್ಲಿ ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ಪತ್ರಕರ್ತರ ಸಮ್ಮೇಳನದಲ್ಲಿ ಕಾರನಿರತ ಪತ್ರಕರ್ತರ ಸಂಘದಿಂದ ಗೌರವ ಸಂಪಾದನೆ.
  • 1998ರಲ್ಲಿ ಮುದ್ರಣ ಕಲೆಯಲ್ಲಿ ಹೆಚ್ಚಿನ ಅಧ್ಯಯನಕ್ಕಾಗಿ ಆಹ್ವಾನದ ಮೇರೆಗೆ ಯುರೋಪ್ ದೇಶಗಳಿಗೆ ಭೇಟಿ.
  • 1999ರಲ್ಲಿ ಕರ್ನಾಟಕ ಪತ್ರಿಕಾ ಅಕಾಡೆಮಿಯಿಂದ ದೊರೆತಿರುವ ಪತ್ರಿಕೋದ್ಯಮದಲ್ಲಿ ಸಾಹಸ ಎಂಬ ವಿಶಿಷ್ಟ ಪ್ರಶಸ್ತಿಗಾಗಿ ಆಯ್ಕೆ